22nd February 2025
ಚಡಚಣ : ಚಡಚಣ ಪ.ಪಂ.ನ ೧೬ ವಾರ್ಡಗಳಿಗೆ ಚುನಾವಣೆ ನಡೆದು ವರ್ಷ ಕಳೆದ ನಂತರ ಕಳೆದ ಆಗಷ್ಟ ತಿಂಗಳಲ್ಲಿ ಮೀಸಲಾತಿ ಪ್ರಕಟವಾಗಿದ್ದು, ಇದೇ ೨೧ರಂದು ಪ.ಪಂ.ನ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ.
ಪ.ಪಂ.ನ ೧೬ ಸದಸ್ಯರ ಪೈಕಿ ಬಿ.ಜೆ.ಪಿ. ೮ ಸದಸ್ಯರು, ಕಾಂಗ್ರೆಸ್ ೪ ಹಾಗೂ ಪಕ್ಷೇತರರು ೪ ಸದಸ್ಯರು ಹಾಗೂ ಲೋಕಸಭಾ ಸದಸ್ಯ ರಮೇಶ ಜಿಗಜಿಣಗಿ, ವಿಧಾನಸಭಾ ಸದಸ್ಯ ವಿಠ್ಠಲ ಕಟಕಧೋಂಡ ಅವರುಗಳ ಮತ ಸೇರಿ ಒಟ್ಟಾರೆ ೧೮ ಮತಗಳ ಬಲಾಬಲ ಹೊಂದಿದ್ದ ಪ.ಪಂ.ನ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಬಿ.ಜೆಪಿ.ಯ ಮಲ್ಲಿಕಾರ್ಜುನ ಧೋತ್ರೆ ಅವರು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನ ಇಲಾಯಿ ನದಾಫ, ಬಿ.ಜೆ.ಪಿ.ಯ ಶ್ರೀಕಾಂತ ಗಂಟಗಲ್ಲ ಹಾಗೂ ಪಕ್ಷೇತರ ಚೈತನ್ಯಕುಮಾರ ನಿರಾಳೆ ಸ್ಫರ್ಧಿಸಿದ್ದು, ಕೊನೆ ಘಳಿಗೆಯಲ್ಲಿ ಪಕ್ಷೇತರ ಅಭ್ಯರ್ಥಿ ಚೈತನ್ಯಕುಮಾರ ನಿರಾಳೆ ತಮ್ಮ ನಾಮಪತ್ರವನ್ನು ಹಿಂಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಜೆ.ಪಿ.ಯ ಶ್ರೀಕಾಂತ ಗಂಟಗಲ್ಲ ಹಾಗೂ ಕಾಂಗ್ರೆಸ್ನ ಇಲಾಯಿ ನದಾಫ ಇಬ್ಬರು ಕಣದಲ್ಲಿ ಉಳಿದಿದ್ದರಿಂದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.
ಉಪಾಧ್ಯಕ್ಷ ಚುನಾವಣೆಯಲ್ಲಿ ಬಿ.ಜೆಪಿ.ಯ ಅಭ್ಯರ್ಥಿ ಶ್ರೀಕಾಂತ ಗಂಟಗಲ್ಲ ೭ ಮತ ಪಡೆದರೆ, ಕಾಂಗ್ರೆಸ್ನ ಅಭ್ಯರ್ಥಿ ಇಲಾಯಿ ನದಾಫ ೧೧ ಮತ ಪಡೆದು ವಿಜೇತರಾಗಿದ್ದಾರೆ ಎಂದು ಚುನಾವಣಾಧಿಕಾರಿ ಚಡಚಣ ತಹಶೀಲದಾರ ಸಂಜಯ ಇಂಗಳೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿ.ಜೆ.ಪಿ. ೮ ಸದಸ್ಯರು ಹಾಗೂ ಒಂದು ಲೋಕಸಭಾ ಸದಸ್ಯರ ಮತ ಸೇರಿ ಒಟ್ಟು ೯ ಬಲಾಬಲ ಹೊಂದಿದ್ದರೂ ಕೂಡ ತನ್ನ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ವಿಫಲವಾಯಿತು.
ಚಡಚಣ ಗ್ರಾ.ಪಂ. ಪ.ಪಂ.ಗೆ ಮೇಲ್ದರ್ಜೆಗೆರಿ ೮ವರ್ಷಗಳ ನಂತರ ಪ್ರಥಮ ಬಾರಿಗೆ ಪ.ಪಂ.ನ ಅಧ್ಯಕ್ಷ ಸ್ಥಾನ ಬಿ.ಜೆ.ಪಿ. ತನ್ನ ಮುಡಿಗೇರಿಸಿಕೊಂಡಿದೆ.
ಸರ್ಕಾರದ ಯೋಜನೆಗಳ ಯಶಸ್ಸಿಗೆ ಪ್ರಾಮಾಣಿಕತೆ ಅತ್ಯವಶ್ಯ. ಮುಸಲ್ಮಾರಿ ಕಾಂಕ್ರೆಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅಮರನಾಥ ಜಾರಕೀಹೊಳಿ ಅಭಿಮತ.
ಕಾರ್ಯಸಿದ್ಧಿ ಆಂಜನೇಯನಿಗೆ ಕೊಳವೆ ಬಾವಿ. ದಾನಿ ದಯಾನಂದ ಪಾಟೀಲ ಕಾರ್ಯಕ್ಕೆ ವಿನಯ ನಾವಲಗಟ್ಟಿ ಶ್ಲ್ಯಾಘನೆ.
ಪ.ಜಾತಿ,ಪಂಗಡದ ಅಭಿವೃದ್ಧಿಗೆ ಇಟ್ಟ ಹಣ ದರ್ಬಳಿಕೆ ಖಂಡಿಸಿ ಮಾ.೪ ರಂದು ಬಿಜೆಪಿ ಪ್ರತಿಭಟನೆ